ವೈವಾಹಿಕ ಜೀವನಕ್ಕೆ ಕಾಲಿಟ್ಟ ರಶ್ಮಿಕಾ – ವಿಜಯ್ : ಐಟಿಸಿ ಹೋಟೆಲ್​ನಲ್ಲಿ ಅದ್ಧೂರಿ ಕಲ್ಯಾಣೋತ್ಸವ

ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್​ ದೇವರಕೊಂಡ ಇಂದು ರಾಜಸ್ಥಾನದ ಉದಯಪುರ ಐಟಿಸಿ ಹೋಟೆಲ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಈ ತಾರಾಜೋಡಿ ತಮ್ಮ ವೈವಾಹಿಕ ಜೀವನದ ಬುದುಕಿಗೆ ಮುನ್ನುಡಿ ಬರೆದಿದೆ.
ರಶ್ಮಿಕಾ ಕರ್ನಾಟಕದ ಕೊಡಗಿನವರು. ವಿಜಯ್​ ಆಂಧ್ರಪ್ರದೇಶದವರು. ಹೀಗಾಗಿ ತೆಲುಗು ಹಾಗೂ ಕೊಡವ ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ ಎನ್ನಲಾಗಿದೆ. ನಿನ್ನೆ ಕುಟುಂಬಸ್ಥರ ಸಮ್ಮುಖದಲ್ಲಿ ಹಳದಿ ಶಾಸ್ತ್ರ ನಡೆಸಲಾಗಿದ್ದು, ಇದರ ಫೋಟೋಗಳನ್ನು ರಶ್ಮಿಕಾ ಹಾಗೂ ವಿಜಯ್​ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ರಶ್ಮಿಕಾ-ವಿಜಯ್ ದೇವರಕೊಂಡಗೆ ಪ್ರಧಾನಿಯಿಂದ ವಿಶ್, ಹೊಸ ಅಧ್ಯಾಯಕ್ಕೆ ಪ್ರೀತಿಯಿಂದ ಶುಭಾಶಯ ತಿಳಿಸಿದ ಮೋದಿ!

ಇದೀಗ ರಶ್ಮಿಕಾ ಹಾಗೂ ವಿಜಯ್​ ದೇವರಕೊಂಡ ಮದುವೆ ಫೋಟೋಗಳಿಗಾಗಿಯೂ ವಿರೋಶ್​ ಜೋಡಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಮೊಬೈಲ್​ ಪೋನ್​, ಕ್ಯಾಮರಾಗಳಿಗೆ ಅನುಮತಿ ಇಲ್ಲದ ಕಾರಣ ಯಾವುದೇ ಫೋಟೋಗಳು ಸೋರಿಕೆಯಾಗಿಲ್ಲ. ಹೀಗಾಗಿ ರಶ್ಮಿಕಾ ಹಾಗೂ ವಿಜಯ್​ ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ ಅಂತಾ ಕಾತುರದಿಂದ ಅಭಿಮಾನಿಗಳು ಕಾಯುವಂತಾಗಿದೆ.

Exit mobile version