ಸಾರ್ವಕಾಲಿಕ ಗರಿಷ್ಠ ದರ ಏರಿಕೆ ಕಂಡ ‘ರಜತ’ : ಗಗನ ಕುಸುಮವಾದ ಬಂಗಾರ..!

Gold Price : ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದ್ದು 1 ಕೆಜಿ ಬೆಳ್ಳಿ ದರ 4 ಲಕ್ಷ ರೂಪಾಯಿ ಆಗಿದೆ. ಇದು ಬೆಳ್ಳಿಯ ಸಾರ್ವಕಾಲಿಕ ಗರಿಷ್ಠ ದರವಾಗಿದೆ. ಬೆಳ್ಳಿ ದರ ಒಂದೇ ದಿನದಲ್ಲಿ 10 ಸಾವಿರ ರೂಪಾಯಿ ಏರಿಕೆ ಕಂಡಿರುವುದು ಜನಸಾಮಾನ್ಯರ ತಲೆ ತಿರುಗಿಸಿದೆ.

ಇತ್ತ ಬಂಗಾರದ ದರ ಕೂಡ 1.67 ಲಕ್ಷ ರೂಪಾಯಿ ಹೆಚ್ಚಳವಾಗಿದೆ. 22 ಕ್ಯಾರೆಟ್​ 10 ಗ್ರಾಂ ಚಿನ್ನದ ದರವು ಇದೀಗ 1,53,150 ರೂಪಾಯಿ ಆಗಿದೆ. 24 ಕ್ಯಾರಟ್​ ಶುದ್ಧ ಚಿನ್ನದ ದರವು 1,67,089 ರೂಪಾಯಿ ಆಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ 1 ಕೆ.ಜಿ ಬೆಳ್ಳಿ ದರ ಕೇವಲ 1 ಲಕ್ಷ ರೂಪಾಯಿ ಆಗಿತ್ತು. ಕೇವಲ 8 ತಿಂಗಳ ಅವಧಿಯಲ್ಲಿ 1 ಕೆ.ಜಿ ಬೆಳ್ಳಿ ದರ 4 ಲಕ್ಷ ರೂಪಾಯಿ ಆಗಿದೆ. ಅಮೆರಿಕದ ತೆರಿಗೆ ದಾಳಿಯಿಂದಾಗಿ ಜಾಗತಿಕ ಅನಿಶ್ಚಿತತೆ ಉಂಟಾಗಿರುವುದು , ಜಾಗತಿಕವಾಗಿ ಇರುವ ಬೇಡಿಕೆಗಿಂತ ಕಡಿಮೆ ಪ್ರಮಾಣದ ಲೋಹಗಳ ಪೂರೈಕೆ ಆಗುತ್ತಿರುವುದೇ ಚಿನ್ನ (Gold Price) ಹಾಗೂ ಬೆಳ್ಳಿ ದರದ ಏರಿಕೆಗೆ ಕಾರಣವಾಗಿದೆ.

ಇದನ್ನೂ ಓದಿ: ಚೀನಾದಲ್ಲಿ ಬೆಳ್ಳಿ ಬೆಲೆ ಜಾಗತಿಕ ಮಾರುಕಟ್ಟೆಗಿಂತ ಕೆಜಿಗೆ 45,000 ರೂ. ಹೆಚ್ಚು! ಏನು ಕಾರಣ?

ಷೇರು ಮಾರುಕಟ್ಟೆ ಕುಸಿತದಿಂದಾಗಿ, ಚಿನ್ನ ಹಾಗೂ ಬೆಳ್ಳಿಯ ಮೇಲೆ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಒಂದೆಡೆಯಾದರೆ ಕೈಗಾರಿಕಾ ವಲಯದಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚುತ್ತಿರುವುದು ಬೆಳ್ಳಿಯ ದರ ಏರಿಕೆಗೆ ಮತ್ತೊಂದು ಕಾರಣವಾಗಿದೆ.

Exit mobile version