ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಶಾಕ್ : ಸೇವಾ ಶುಲ್ಕ ದರದಲ್ಲಿ ಮತ್ತೆ ಏರಿಕೆ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರಿಗೆ ಬಿಗ್​ ಶಾಕ್​ ನೀಡಿದೆ. ಎಟಿಎಂ ಮತ್ತು ಆಟೋಮೇಟೆಡ್ ಡೆಪಾಸಿಟ್ ಕಮ್ ವಿತ್‌ಡ್ರಾವಲ್ ಮಷಿನ್ ಸೇವಾ ಶುಲ್ಕಗಳನ್ನು ಪರಿಷ್ಕರಣೆ ಮಾಡಿದ್ದು ಗ್ರಾಹಕರ ಜೇಬು ಸುಡುವುದು ಪಕ್ಕಾ ಎನ್ನಲಾಗಿದೆ. 2025ರ ಡಿಸೆಂಬರ್ 1 ರಿಂದಲೇ ಜಾರಿಗೆ ಬಂದಿದ್ದು, 2025ರ ಫೆಬ್ರವರಿಯ ನಂತರ ಎಸ್‌ಬಿಐ ಮಾಡುತ್ತಿರುವ ಮೊದಲ ಶುಲ್ಕ ಹೆಚ್ಚಳ ಇದಾಗಿದೆ.
ಎಸ್​ಬಿಐ ಸೇವಾ ಶುಲ್ಕ ಪರಿಷ್ಕರಣೆಯ ಅನುಸಾರ, ಉಚಿತ ಮಿತಿಯ ನಂತರ ಇತರೆ ಬ್ಯಾಂಕ್‌ಗಳ ಎಟಿಎಂನಲ್ಲಿ ಹಣ ಬಿಡಿಸಿದರೆ ಪ್ರತಿ ವ್ಯವಹಾರಕ್ಕೆ 23 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕಿದೆ. ಈ ಮೊದಲು ಈ ಶುಲ್ಕ 21 ರೂ. ಮತ್ತು ಜಿಎಸ್‌ಟಿ ಇತ್ತು. ಬ್ಯಾಲೆನ್ಸ್ ಪರಿಶೀಲನೆ ಮತ್ತು ಮಿನಿ ಸ್ಟೇಟ್‌ಮೆಂಟ್‌ ಪಡೆಯುವ ಶುಲ್ಕವನ್ನೂ ಏರಿಕೆ ಮಾಡಲಾಗಿದ್ದು,. ಈ ಹಿಂದಿನ 10 ರೂ. ನಿಂದ 11 ರೂ. + ಜಿಎಸ್‌ಟಿಗೆ ಮಾಡಲಾಗಿದೆ.

ಇದನ್ನೂ ಓದಿ: ಪಿಎಂ ಕಿಸಾನ್ 22ನೇ ಕಂತು: 2,000 ಪಡೆಯಲು ಹೀಗೆ ಮಾಡುವುದು ಕಡ್ಡಾಯ

ಸಾಮಾನ್ಯ ಉಳಿತಾಯ ಖಾತೆದಾರರಿಗೆ ನೀಡಲಾದ ಉಚಿತ ವಹಿವಾಟುಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ. 5 ಬಾರಿ ಮಿತಿ ಮೀರಿದ ನಂತರವಷ್ಟೇ ಹೊಸ ದರಗಳು ಅನ್ವಯವಾಗಲಿವೆ. ಎಟಿಎಂ ಸೇವೆಗಳಿಗೆ ಸಂಬಂಧಿಸಿದ ಇಂಟರ್‌ಚೇಂಜ್ ಶುಲ್ಕದಲ್ಲಿ ಏರಿಕೆಯಾಗಿರುವ ಕಾರಣ ಸೇವಾದರ ಪರಿಷ್ಕರಣೆ ಮಾಡಿರುವುದಾಗಿ ಬ್ಯಾಂಕ್​ ತಿಳಿಸಿದೆ.

Exit mobile version