ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ : ನಾಳೆ ರೈತರ ಖಾತೆಗೆ ಹಣ

PM Kisan Yojana 20th Installment : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 20ನೇ ಕಂತಿನ ಹಣ ಬಿಡುಗಡೆಗೆ ಬಾಕಿ ಇದೆ. ಕೊನೆಗೂ ರೈತರ ಖಾತೆಗೆ ಹಣ ಜಮೆ ಆಗುವ ದಿನಾಂಕ ಫಿಕ್ಸ್‌ ಆಗಿದೆ.

ಈ ಕಂತಿನಲ್ಲಿ ಸುಮಾರು 9.7 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 20,500 ಕೋಟಿ ರೂ. ಜಮಾ ಆಗುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಗಸ್ಟ್‌ 2 ರಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡಲಿದ್ದಾರೆ. ಕಳೆದ ಮೂರು ತಿಂಗಳಿನಿಂದಲೂ ಹಣಕ್ಕಾಗಿ ಕಾಯುತ್ತಿದ್ದವರಿಗೆ ಖುಷಿ ಕೊಟ್ಟಿದೆ.

ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ 6,000 ರೂ.ಗಳನ್ನು ಮೂರು ಕಂತುಗಳಲ್ಲಿ ತಲಾ 2,000 ರೂ.ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಕಿಸಾನ್‌ ಹಣ ಪಡೆಯಲು ರೈತರಿಗೆ ಇಕೆವೈಸಿ ಕಡ್ಡಾಯ

ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಲಾಭ ಪಡೆಯಲು ರೈತರು ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಈಗಾಗಲೇ ಬಹುತೇಕ ರೈತರು ತಮ್ಮ ಖಾತೆಗೆ ಇಕೆವೈಸಿ ಮಾಡಿಸಿದ್ದಾರೆ. ಕಿಸಾನ್‌ ಸಮ್ಮಾನ್‌ನಿಧಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಅನ್ನೋದನ್ನು ಖಚಿತ ಪಡಿಸಿಕೊಳ್ಳಿ.

ಮನೆಯಲ್ಲಿಯೇ ಈ ಕೆವೈಸಿ ಮಾಡಿಸುವುದು ಹೇಗೆ ?

ನೀವು ಮನೆಯಲ್ಲಿಯೇ ಇ-ಕೆವೈಸಿ (e-KYC) ಮಾಡಿಸಲು ಕೆಲವು ಸರಳ ಹಂತಗಳನ್ನು ಅನುಸರಿಸಬಹುದು. ಪ್ರತಿಯೊಂದು ಯೋಜನೆಗೂ ಅದರದೇ ಆದ ನಿರ್ದಿಷ್ಟ ಪ್ರಕ್ರಿಯೆಗಳಿರುತ್ತವೆ.

ಸಾಮಾನ್ಯವಾಗಿ, ಇದು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಪಿಎಂ-ಕಿಸಾನ್ ಯೋಜನೆಯ ಉದಾಹರಣೆ ನೀಡಲಾಗಿದೆ.

ಪಿಎಂ-ಕಿಸಾನ್ ಯೋಜನೆಗೆ ಇ-ಕೆವೈಸಿ ಮಾಡುವ ವಿಧಾನ:

Also Read : ಎಸ್‌ಬಿಐ ನೇಮಕಾತಿ 2025 : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ 

ಇ-ಕೆವೈಸಿ ಮಾಡಲು ಅಗತ್ಯವಾದ ಅಂಶಗಳು:

ಕೆಲವೊಮ್ಮೆ ಸರ್ವರ್ ಸಮಸ್ಯೆಗಳಿಂದಾಗಿ ಇ-ಕೆವೈಸಿ ಪ್ರಕ್ರಿಯೆ ವಿಳಂಬವಾಗಬಹುದು. ಆಗ ನೀವು ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಬಹುದು.

Also Read : ಪಿಎಂ ಕಿಸಾನ್ ಯೋಜನೆ : ಕರ್ನಾಟಕದ 5 ಲಕ್ಷ ರೈತರಿಗೆ ಸಿಗಲ್ಲ ಹಣ

ಒಂದು ವೇಳೆ ನೀವು ಆಧಾರ್‌ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸಿಲ್ಲವಾದರೆ, ಅಥವಾ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆ ಕಳೆದುಹೋಗಿದ್ದರೆ, ನೀವು ಹತ್ತಿರದ ಸಿಎಸ್ಸಿ ಕೇಂದ್ರ (Common Service Centre) ಅಥವಾ ಗ್ರಾಮ ಒನ್ (Grama One) ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು.

PM Kisan Yojana 20th Installment Date fix Kannada News

Exit mobile version