ಕರ್ನಾಟಕದ ರೈತರಿಗೆ ಶುಭ ಸುದ್ದಿ: 22,000 ಕನ್ನಡಿಗ ಕೃಷಿಕರ ಖಾತೆಗೆ ಶೀಘ್ರವೇ ಹಣ ಬಿಡುಗಡೆ

PM Kisan 22nd Installment | Karnataka 22000 farmers: ಕರ್ನಾಟಕದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಬಾಕಿ ಇದ್ದ ಪಿಎಂ-ಕಿಸಾನ್ (PM-Kisan) ಯೋಜನೆಯ ಹಣವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. ತಾಂತ್ರಿಕ ಕಾರಣಗಳಿಂದಾಗಿ ಹಣ ಪಡೆಯಲು ಸಾಧ್ಯವಾಗದ ಸುಮಾರು 22,000 ಅರ್ಹ ರೈತರನ್ನು ಈಗ ಪಾವತಿ ಪಟ್ಟಿಗೆ ಸೇರಿಸಲಾಗಿದ್ದು, ಅವರಿಗೆ ಶೀಘ್ರದಲ್ಲೇ ಹಣ ಜಮೆ ಆಗಲಿದೆ. ಉಳಿದ ರೈತರ ದಾಖಲೆಗಳ ಪರಿಶೀಲನೆ ನಡೆದ ನಂತರ ಅವರಿಗೂ ಲಾಭ ಸಿಗಲಿದೆ.

ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಒಂದು ನೋಟ

ಈ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಗುರಿ ಹೊಂದಿದೆ.

ಲಾಭ ಪಡೆಯಲು ರೈತರು ಮಾಡಬೇಕಾದ ಕೆಲಸಗಳು:

ಹಣ ಜಮೆ ಆಗದಿದ್ದಲ್ಲಿ ಅಥವಾ ಹೊಸದಾಗಿ ನೋಂದಾಯಿಸಬೇಕಿದ್ದಲ್ಲಿ ಈ ಕೆಳಗಿನ ಕ್ರಮಗಳು ಕಡ್ಡಾಯ:

  1. ಇ-ಕೆವೈಸಿ (e-KYC): ಪಿಎಂ-ಕಿಸಾನ್ ಪೋರ್ಟಲ್‌ನಲ್ಲಿ ಆಧಾರ್ ಸಂಖ್ಯೆ ಬಳಸಿ ಇ-ಕೆವೈಸಿ ಮಾಡುವುದು ಈಗ ಕಡ್ಡಾಯವಾಗಿದೆ.
  2. ಲ್ಯಾಂಡ್ ಸೀಡಿಂಗ್ (Land Seeding): ನಿಮ್ಮ ಭೂ ದಾಖಲೆಗಳನ್ನು ಕೃಷಿ ಇಲಾಖೆಯ ಪೋರ್ಟಲ್‌ಗೆ ಸರಿಯಾಗಿ ಲಿಂಕ್ ಮಾಡಿರಬೇಕು.
  3. ಆಧಾರ್ ಲಿಂಕ್: ಬ್ಯಾಂಕ್ ಖಾತೆಗೆ ಆಧಾರ್ ಮತ್ತು NPCI ಲಿಂಕ್ ಆಗಿರಬೇಕು.
  4. ಯೂನಿಕ್ ಫಾರ್ಮರ್ ಐಡಿ (Farmer ID): ಕೇಂದ್ರ ಸರ್ಕಾರವು ರೈತರಿಗೆ ಪ್ರತ್ಯೇಕವಾದ ‘ಡಿಜಿಟಲ್ ರೈತ ಐಡಿ’ ಕಡ್ಡಾಯಗೊಳಿಸುತ್ತಿದ್ದು, ಇದನ್ನು ಮಾಡಿಸಿಕೊಳ್ಳುವುದು ಅವಶ್ಯಕ.

ಗಮನಿಸಿ: ಒಂದು ಕುಟುಂಬದಲ್ಲಿ ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಲಾಭ ಪಡೆಯಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ಸ್ಥಳೀಯ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.

Exit mobile version