ಪಾನ್-ಆಧಾರ್ ಲಿಂಕ್ ಮಾಡದವರಿಗೆ ಶಾಕ್: ನಿಮ್ಮ ಕಾರ್ಡ್ ‘ನಿಷ್ಕ್ರಿಯ’ವಾಗಿದೆಯೇ ? ಚೆಕ್‌ ಮಾಡಿ

ಪಾನ್ ಕಾರ್ಡ್ (PAN Card) ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ. ಸರ್ಕಾರವು ನೀಡಿದ್ದ ಹಲವಾರು ಗಡುವುಗಳು ಈಗಾಗಲೇ ಮುಗಿದಿದ್ದು, ಯಾರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲವೋ ಅಂತಹವರ ಪಾನ್ ಕಾರ್ಡ್‌ಗಳು ಮಾರ್ಚ್ 2026 ರ ಹೊತ್ತಿಗೆ 'ನಿಷ್ಕ್ರಿಯ' (Inoperative) ಆಗಿವೆ.

pan aadhaar link penalty : ಭಾರತದ ಪ್ರತಿಯೊಬ್ಬ ನಾಗರೀಕರಿಗೂ ಪ್ರಮುಖ ಹಣಕಾಸಿನ ದಾಖಲೆ ಆಗಿರುವ ಪಾನ್ ಕಾರ್ಡ್ (PAN Card) ಅನ್ನು ಆಧಾರ್ ಕಾರ್ಡ್‌ (aadhaar Card)ನೊಂದಿಗೆ ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ. ಸರ್ಕಾರವು ನೀಡಿದ್ದ ಹಲವಾರು ಗಡುವುಗಳು ಈಗಾಗಲೇ ಮುಗಿದಿದ್ದು, ಯಾರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲವೋ ಅಂತಹವರ ಪಾನ್ ಕಾರ್ಡ್‌ಗಳು ಮಾರ್ಚ್ 2026 ರ ಹೊತ್ತಿಗೆ ‘ನಿಷ್ಕ್ರಿಯ’ (Inoperative) ಆಗಿವೆ.

ಒಂದು ವೇಳೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ, ನಿಮ್ಮ ದೈನಂದಿನ ಹಣಕಾಸು ವ್ಯವಹಾರಗಳು ಸ್ತಬ್ಧವಾಗುವ ಸಾಧ್ಯತೆಯಿದೆ. ಈ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

ಪಾನ್-ಆಧಾರ್ ಲಿಂಕ್ – ಡೆಡ್‌ಲೈನ್ ಮುಕ್ತಾಯ: ಮುಂದೇನು ಮಾಡುವುದು ?

ಪಾನ್ ಮತ್ತು ಆಧಾರ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು ನೀಡಿದ್ದ ಅಂತಿಮ ಗಡುವು ಈಗಾಗಲೇ ಮುಕ್ತಾಯಗೊಂಡಿದೆ. ಲಿಂಕ್ ಮಾಡದ ಕಾರ್ಡ್‌ಗಳನ್ನು ಇಲಾಖೆಯು ಅಮಾನ್ಯಗೊಳಿಸಿಲ್ಲ, ಬದಲಿಗೆ ‘ನಿಷ್ಕ್ರಿಯ’ ಎಂದು ಘೋಷಿಸಿದೆ. ಇದರರ್ಥ ಕಾರ್ಡ್ ನಿಮ್ಮ ಬಳಿ ಇದ್ದರೂ, ಯಾವುದೇ ಅಧಿಕೃತ ವ್ಯವಹಾರಗಳಿಗೆ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ.

Also Read : ಬಾಡಿಗೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಲೀಸ್ ಅಗ್ರಿಮೆಂಟ್‌ಗೆ ಅಲೆದಾಟ ಬೇಕಿಲ್ಲ, ಮನೆಯಲ್ಲೇ ಕುಳಿತು ಮಾಡಿಕೊಳ್ಳಿ ಒಪ್ಪಂದ

pan aadhaar link penalty : 1,000 ರೂ. ದಂಡ ಮತ್ತು ಮರು-ಸಕ್ರಿಯ ಪ್ರಕ್ರಿಯೆ

ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಗಾಬರಿ ಪಡಬೇಕಿಲ್ಲ. ಇದನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶವಿದೆ. ಆದರೆ, ಈಗ ಲಿಂಕ್ ಮಾಡಬೇಕೆಂದರೆ 1,000 ರೂಪಾಯಿ ದಂಡ ಪಾವತಿಸುವುದು ಕಡ್ಡಾಯ.

ಹಣ ಪಾವತಿ: ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ‘e-Pay Tax’ ಮೂಲಕ ಈ ದಂಡವನ್ನು ಪಾವತಿಸಬೇಕು.

Aslo Read : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಅಲರ್ಟ್: ₹2,000 ಹಣ ಪಡೆಯಲು ಬೇಕಾ ‘ಜೀವಿತ ಪ್ರಮಾಣಪತ್ರ

ದಂಡ ಪಾವತಿಸಿ ಲಿಂಕ್ ಮಾಡಿದ ತಕ್ಷಣ ಕಾರ್ಡ್ ಸಕ್ರಿಯವಾಗುವುದಿಲ್ಲ. ದಾಖಲೆಗಳ ಪರಿಶೀಲನೆ ನಡೆದು ಕಾರ್ಡ್ ಮತ್ತೆ ಕೆಲಸ ಮಾಡಲು 7 ರಿಂದ 30 ದಿನಗಳ ಕಾಲಾವಕಾಶ ಬೇಕಾಗುತ್ತದೆ.

 ಪಾನ್ ಕಾರ್ಡ್‌ ನಿಷ್ಕ್ರಿಯ ಆದ್ರೆ ತೊಂದರೆ ಏನು ?

ಪಾನ್ ಕಾರ್ಡ್ ನಿಷ್ಕ್ರಿಯವಾದರೆ ನೀವು ಈ ಕೆಳಗಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ:

ಪಾನ್‌ – ಆಧಾರ್‌ ಲಿಂಕ್‌ ಆಗಿದ್ಯಾ ? ಸ್ಟೇಟಸ್ ಚೆಕ್ ಮಾಡುವುದು ಹೇಗೆ ?

ನಿಮ್ಮ ಪಾನ್ ಕಾರ್ಡ್ ಆಧಾರ್‌ಗೆ ಲಿಂಕ್ ಆಗಿದೆಯೇ ಎಂದು ತಿಳಿಯಲು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ‘Link Aadhaar Status’ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಪಾನ್ ಮತ್ತು ಆಧಾರ್ ಸಂಖ್ಯೆ ನಮೂದಿಸಿದರೆ ನಿಮ್ಮ ಕಾರ್ಡ್‌ನ ಸ್ಥಿತಿ ತಿಳಿಯುತ್ತದೆ.

ಹಣಕಾಸಿನ ತುರ್ತು ಸಂದರ್ಭಗಳಲ್ಲಿ ತೊಂದರೆಯಾಗದಂತೆ ತಡೆಯಲು ಕೂಡಲೇ ನಿಮ್ಮ ಪಾನ್-ಆಧಾರ್ ಸ್ಥಿತಿಯನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ದಂಡ ಪಾವತಿಸಿ ಲಿಂಕ್ ಮಾಡಿ.

Exit mobile version