ಉಡುಪಿ : ಗ್ಯಾಸ್​ ಅಭಾವ.. ಸಂಕಷ್ಟದಲ್ಲಿ ಚಿನ್ನಾಭರಣ ತಯಾರಕರು..!

LPG Cylinder Shortage: ಚಿನ್ನಾಭರಣ ಮೇಕಿಂಗ್​ ಘಟಕಗಳು ಸಂಪೂರ್ಣ ಸಿಲಿಂಡರ್​ಗಳ ಮೇಲೆಯೇ ಅವಲಂಬಿತವಾಗಿದ್ದು, ಇವುಗಳ ಅಭಾವದಿಂದಾಗಿ ಹೊಸ ತಲೆನೋವು ಶುರುವಾಗಿದೆ.

ಉಡುಪಿ : ಮೊದಲೇ ಬೆಲೆ ಏರಿಕೆಯಿಂದಾಗಿ ಚಿನ್ನಾಭರಣ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ. ಈ ನಡುವೆ ಇದೀಗ ಚಿನ್ನಾಭರಣ ಉದ್ಯಮಕ್ಕೂ ಗ್ಯಾಸ್​ ಸಂಕಷ್ಟ ಎದುರಾಗಿದೆ. ಹೌದು..! ಉಡುಪಿಯಲ್ಲಿ ಚಿನ್ನಾಭರಣ ತಯಾರಕ ಘಟಕಗಳು ಗ್ಯಾಸ್​ ಎಮೆರ್ಜೆನ್ಸಿ (LPG Cylinder Shortage) ಎದುರಿಸುತ್ತಿವೆ. ಚಿನ್ನಾಭರಣ ಮೇಕಿಂಗ್​ ಘಟಕಗಳು ಸಂಪೂರ್ಣ ಸಿಲಿಂಡರ್​ಗಳ ಮೇಲೆಯೇ ಅವಲಂಬಿತವಾಗಿದ್ದು, ಇವುಗಳ ಅಭಾವದಿಂದಾಗಿ ಹೊಸ ತಲೆನೋವು ಶುರುವಾಗಿದೆ.

ಮೊದಲೆಲ್ಲ ಫೆರಿಫಿನ್​ ವ್ಯಾಕ್ಸ್​ ಬಳಸಿ ಚಿನ್ನಾಭರ ತಯಾರಿ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಚಿನ್ನಾಭರಣ ತಯಾರಿಕಾ ಘಟಕಗಳು ಗ್ಯಾಸ್​ ಸಂಪರ್ಕ ಹೊಂದಿವೆ. ಚಿನ್ನ ಬಿಸಿ ಮಾಡುವುದು, ಆಭರಣಗಳಿಗೆ ನಿಖರವಾದ ಆಕಾರ ನೀಡುವಲ್ಲಿ ಚಿನ್ನಾಭರಣದ ಪಾತ್ರ ಮಹತ್ವದ್ದಾಗಿದೆ. ಎರಡು ದಿನಗಳಿಗೆ ಒಮ್ಮೆ ಹೊಸ ವಾಣಿಜ್ಯ ಸಿಲಿಂಡರ್​ನ ಅವಶ್ಯಕತೆ ಇರುತ್ತದೆ. ಆದರೆ ಇದೀಗ ವಾಣಿಜ್ಯ ಸಿಲಿಂಡರ್​ಗೆ ಅಭಾವ ಎದುರಾಗಿರುವುದಿಂದ ಚಿನ್ನಾಭರಣ ತಯಾರಿಕಾ ಉದ್ಯಮಕ್ಕೂ ಬಿಸಿ ತಟ್ಟಿದಂತಾಗಿದೆ.

ಇದನ್ನೂ ಓದಿ: ಗ್ಯಾಸ್ ಬಿಲ್ ಅಪ್‌ಡೇಟ್ ಹೆಸರಲ್ಲಿ ಉಡುಪಿ ಮಹಿಳೆಗೆ ₹1.45 ಲಕ್ಷ ನಾಮ ! ಇಪಿಎಸ್‌ (APK) ಲಿಂಕ್ ಬಗ್ಗೆ ಇರಲಿ ಎಚ್ಚರ

ಚಿನ್ನದ ಬೆಲೆ ಏರಿಕೆಯಿಂದಾಗಿ ಉತ್ಪಾದನೆ ಕುಂಠಿತಗೊಂಡಿದೆ. ಇದೀಗ ಗ್ಯಾಸ್​ ಅಭಾವದಿಂದ ಚಿನ್ನಾಭರಣ ತಯಾರಿಕೆ ಸ್ಥಗಿತಗೊಂಡರೆ ನಮ್ಮ ಕತೆ ಏನು ಎಂದು ಅಕ್ಕಸಾಲಿಗರು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ನಮ್ಮ ಕಷ್ಟಕ್ಕೆ ಶೀಘ್ರದಲ್ಲೇ ಪರಿಹಾರ ಒದಗಿಸಬೇಕು ಎಂದು ಉಡುಪಿಯ ಅಕ್ಕಸಾಲಿಗರು ಮನವಿಮಾಡಿದ್ದಾರೆ.

Exit mobile version