ಗರ್ಭಿಣಿಯರಿಗೆ ಕೇಂದ್ರದಿಂದ ₹5,000 ಆರ್ಥಿಕ ನೆರವು: ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Pradhan Mantri Matru Vandana Yojana: ಮಕ್ಕಳ ಭವಿಷ್ಯ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಚಿಂತಿಸುವ ಪೋಷಕರಿಗೆ ನೆರವಾಗಲು ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ’ (PMMVY) ಅಡಿಯಲ್ಲಿ ವಿಶೇಷ ಆರ್ಥಿಕ ಸೌಲಭ್ಯವನ್ನು ನೀಡುತ್ತಿದೆ. ಗರ್ಭಿಣಿಯರು ಮತ್ತು ಬಾಣಂತಿಯರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಯೋಜನೆಯಡಿ ಸಿಗುವ ಲಾಭಗಳೇನು?

ಈ ಯೋಜನೆಯ ಅಡಿಯಲ್ಲಿ ಅರ್ಹ ಮಹಿಳೆಯರಿಗೆ ಒಟ್ಟು ಎರಡು ಹಂತಗಳಲ್ಲಿ ಹಣಕಾಸಿನ ನೆರವು ಸಿಗಲಿದೆ:

  1. ಮೊದಲ ಮಗುವಿಗೆ: ಒಟ್ಟು ₹5,000 ಸಹಾಯಧನ.
    • ಮೊದಲ ಕಂತು: ಗರ್ಭಧಾರಣೆಯ ನೋಂದಣಿ ನಂತರ ₹3,000.
    • ಎರಡನೇ ಕಂತು: ಮಗುವಿನ ಜನನದ ನಂತರ ಉಳಿದ ₹2,000.
  2. ಎರಡನೇ ಮಗು (ಹೆಣ್ಣು ಮಗುವಾದರೆ): ಎರಡನೇ ಮಗು ಹೆಣ್ಣಾದಲ್ಲಿ ತಾಯಂದಿರಿಗೆ ನೇರವಾಗಿ ₹6,000 ಆರ್ಥಿಕ ನೆರವು ಅವರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

ಅರ್ಹತಾ ಮಾನದಂಡಗಳು:

ಅರ್ಜಿ ಸಲ್ಲಿಸುವುದು ಹೇಗೆ?

ಈ ಸೌಲಭ್ಯವನ್ನು ಪಡೆಯಲು ಎರಡು ಮಾರ್ಗಗಳಿವೆ:

ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುಧಾರಿಸುವುದು, ಗರ್ಭಾವಸ್ಥೆಯಲ್ಲಿ ಸರಿಯಾದ ಪೌಷ್ಟಿಕಾಂಶ ಸಿಗುವಂತೆ ನೋಡಿಕೊಳ್ಳುವುದು ಮತ್ತು ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.

Exit mobile version