ಅಂಚೆ ಕಚೇರಿಯ ಈ 5 ಯೋಜನೆಗಳಲ್ಲಿ ಹಣ ಹೂಡಿ : ಬ್ಯಾಂಕ್‌ಗಿಂತಲೂ ಹೆಚ್ಚಿನ ಬಡ್ಡಿ, ನಿಮ್ಮ ಹಣಕ್ಕೆ ಪೂರ್ಣ ಗ್ಯಾರಂಟಿ

Best post office savings schemes : ನೀವು ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಬೇಕೆ ? ಹಾಗಿದ್ದರೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ.2026ರಲ್ಲಿ ಅಂಚೆ ಕಚೇರಿಯು ಬ್ಯಾಂಕ್‌ಗಳಿಗಿಂತಲೂ ಆಕರ್ಷಕ ಬಡ್ಡಿ ದರವನ್ನು ನೀಡುತ್ತಿದ್ದು, ಸಾಮಾನ್ಯ ಜನರಿಗೆ ಇದು ಸುಭದ್ರ ಹೂಡಿಕೆ ಬ್ಯಾಂಕ್‌ಗಿಂತಲೂ ಉತ್ತಮ.

ಸಾಮಾನ್ಯವಾಗಿ ಜನರು ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡ್ತಾರೆ. ಆದರೆ ಅಂಚೆಕಚೇರಿಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಬ್ಯಾಂಕುಗಳಿಗಿಂತ ಅಧಿಕ ಲಾಭದ ಜೊತೆಗೆ ನಿಮ್ಮ ಹಣಕ್ಕೆ ಕೇಂದ್ರ ಸರಕಾರವೇ ಪೂರ್ಣ ಗ್ಯಾರಂಟಿ ನೀಡುತ್ತಿದೆ. ಫೆಬ್ರವರಿ 2026ರ ಅಂಕಿಅಂಶಗಳ ಪ್ರಕಾರ, ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಮಾಡಲು ಇರುವ ಟಾಪ್ 5 ಸ್ಕೀಮ್‌ಗಳು (Top 5 Best post office savings schemes) ಇಲ್ಲಿವೆ:

ಸುಕನ್ಯಾ ಸಮೃದ್ಧಿ ಯೋಜನೆ (SSY) – ಹೆಣ್ಣು ಮಕ್ಕಳಿಗಾಗಿ ಬಂಪರ್

ನಿಮ್ಮ ಮನೆಯಲ್ಲಿ 10 ವರ್ಷದೊಳಗಿನ ಹೆಣ್ಣು ಮಗುವಿದ್ದರೆ ಇದು ಅತ್ಯುತ್ತಮ ಯೋಜನೆ. ಪ್ರಸ್ತುತ ಈ ಯೋಜನೆಗೆ 8.2% ಬಡ್ಡಿ ನೀಡಲಾಗುತ್ತಿದೆ. ಇದು ಅಂಚೆ ಕಚೇರಿಯಲ್ಲೇ ಅತಿ ಹೆಚ್ಚು ಬಡ್ಡಿ ನೀಡುವ ಯೋಜನೆಯಾಗಿದ್ದು, ಮಗಳ ಮದುವೆ ಅಥವಾ ಉನ್ನತ ಶಿಕ್ಷಣಕ್ಕೆ ದೊಡ್ಡ ಮೊತ್ತದ ಹಣ ಸಂಗ್ರಹಿಸಲು ಸಹಕಾರಿ.

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)

60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ವರದಾನ. ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ವಾರ್ಷಿಕ 8.2% ಬಡ್ಡಿ ಸಿಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಹಣ ನಿಮ್ಮ ಕೈ ಸೇರುತ್ತದೆ, ಇದು ನಿವೃತ್ತ ಜೀವನಕ್ಕೆ ಆಸರೆಯಾಗುತ್ತದೆ.

Also Read : ಬಾಲ ಆಧಾರ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್ : 5 ಮತ್ತು 15 ವರ್ಷ ತುಂಬಿದ ಕೂಡಲೇ ಮರೆಯದೇ ಈ ಕೆಲಸ ಮಾಡಿ !

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC)

ಮಹಿಳೆಯರಿಗಾಗಿಯೇ ವಿಶೇಷವಾಗಿರುವ ಈ ಯೋಜನೆಯಲ್ಲಿ 2 ವರ್ಷಗಳ ಅವಧಿಗೆ ಹಣ ಹೂಡಿಕೆ ಮಾಡಬಹುದು. ಇದಕ್ಕೆ 7.5% ಬಡ್ಡಿ ಲಭ್ಯವಿದ್ದು, ಗರಿಷ್ಠ 2 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಲು ಅವಕಾಶವಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)

ಸುರಕ್ಷಿತವಾಗಿ 5 ವರ್ಷಗಳ ಕಾಲ ಹಣ ಹೂಡಿಕೆ ಮಾಡಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಸ್ಕೀಮ್. ಇದಕ್ಕೆ ವಾರ್ಷಿಕ 7.7% ಬಡ್ಡಿ ಸಿಗುತ್ತದೆ. ಇದು ತೆರಿಗೆ ಉಳಿತಾಯಕ್ಕೂ (Section 80C)ಸಹಕಾರಿಯಾಗಿದೆ.

ಮಾಸಿಕ ಆದಾಯ ಯೋಜನೆ (MIS)

ಒಂದೇ ಬಾರಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ ಪ್ರತಿ ತಿಂಗಳು ಸಂಬಳದಂತೆ ಆದಾಯ ಪಡೆಯಬೇಕೆ ? ಹಾಗಿದ್ದರೆ MIS ಯೋಜನೆ ಆಯ್ಕೆ ಮಾಡಿ. ಇದಕ್ಕೆ 7.4% ಬಡ್ಡಿ ಇದ್ದು, ವೈಯಕ್ತಿಕ ಖಾತೆಯಲ್ಲಿ 9 ಲಕ್ಷ ರೂ. ಮತ್ತು ಜಂಟಿ ಖಾತೆಯಲ್ಲಿ 15 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು.

Also Read : ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಇವೆ? ಬೇರೆಯವರು ಬಳಸುತ್ತಿದ್ದರೆ ಹೀಗೆ ಪತ್ತೆಹಚ್ಚಿ! ಇಲ್ಲಿದೆ ಹಂತ-ಹಂತದ ಮಾಹಿತಿ

ಅಂಚೆ ಕಚೇರಿ ಯೋಜನೆಗಳ ವಿಶೇಷತೆ ಏನು ?

ಬಡ್ಡಿ ದರಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಹೂಡಿಕೆ ಮಾಡುವ ಮೊದಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಪೂರ್ಣ ವಿವರ ಪಡೆಯಿರಿ.

5 Post Office Schemes Offering Higher Interest Rates and 100% Safety

Exit mobile version