Bank Strike: ಬ್ಯಾಂಕ್‌ ಮುಷ್ಕರ: ಜನವರಿ 27, ಮಂಗಳವಾರ ಬ್ಯಾಂಕ್‌ಗಳಿಗೆ ರಜೆ ಇದ್ಯಾ?

Bank Strike on 27th January Monday ನವದೆಹಲಿ: ನೀವು ಜನವರಿ 27, ಮಂಗಳವಾರ ಬ್ಯಾಂಕ್ ಕೆಲಸಗಳಿಗಾಗಿ ಹೋಗಲು ಯೋಜಿಸಿದ್ದರೆ ಈ ಸುದ್ದಿ ಗಮನಿಸಿ. ಐದು ದಿನಗಳ ಕೆಲಸದ ವಾರವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟವು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸೇವೆಗಳಲ್ಲಿ ನಾಳೆ ಭಾರಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಮುಷ್ಕರಕ್ಕೆ ಕಾರಣವೇನು?

ಬ್ಯಾಂಕ್ ಉದ್ಯೋಗಿಗಳ ಒಕ್ಕೂಟವಾದ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಈ ಪ್ರತಿಭಟನೆಯ ನೇತೃತ್ವ ವಹಿಸಿದೆ. 2024ರ ಮಾರ್ಚ್‌ನಲ್ಲಿ ನಡೆದ ವೇತನ ಪರಿಷ್ಕರಣೆ ಒಪ್ಪಂದದ ವೇಳೆ, ತಿಂಗಳ ಎಲ್ಲ ಶನಿವಾರಗಳನ್ನು ರಜೆ ಎಂದು ಘೋಷಿಸಲು ಒಪ್ಪಿಕೊಳ್ಳಲಾಗಿತ್ತು. ಆದರೆ, ಇದುವರೆಗೂ ಸರ್ಕಾರ ಈ ನಿರ್ಧಾರವನ್ನು ಅನುಷ್ಠಾನಕ್ಕೆ ತಂದಿಲ್ಲ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳು ಮುಷ್ಕರದ ಹಾದಿ ಹಿಡಿದಿದ್ದಾರೆ.

ಮುಷ್ಕರದ ಪ್ರಮುಖ ಅಂಶಗಳು:

ಯಾವ ಬ್ಯಾಂಕ್‌ಗಳ ಮೇಲೆ ಪರಿಣಾಮ?

ಈ ಮುಷ್ಕರದಿಂದಾಗಿ ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ ಮತ್ತು ಕೆನರಾ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಖಾಸಗಿ ಬ್ಯಾಂಕ್‌ಗಳ ಸ್ಥಿತಿ: HDFC, ICICI ಮತ್ತು ಕೋಟಕ್ ಮಹೀಂದ್ರಾ ಅಂತಹ ಪ್ರಮುಖ ಖಾಸಗಿ ಬ್ಯಾಂಕ್‌ಗಳ ಸೇವೆಗಳು ಎಂದಿನಂತೆ ಇರಲಿವೆ. ಹಣ ವರ್ಗಾವಣೆ ಅಥವಾ ತುರ್ತು ಕೆಲಸಗಳಿದ್ದರೆ ಇಂದೇ ಮುಗಿಸಿಕೊಳ್ಳಿ ಅಥವಾ ಡಿಜಿಟಲ್ ಬ್ಯಾಂಕಿಂಗ್ (Net Banking/UPI) ವ್ಯವಸ್ಥೆಯನ್ನು ಅವಲಂಬಿಸಿ.

Exit mobile version