ಬೈಂದೂರು: ಹೋಟೆಲ್ ಬಳಿ ಮಟ್ಕಾ ಜುಗಾರಿ ಆಟ; ಆರೋಪಿ ವಶ

ಪಿಎಸ್‌ಐ ಸುನೀಲ ಕುಮಾರ್ ಮತ್ತು ಸಿಬ್ಬಂದಿಯ ತಂಡ ಸ್ಥಳದ ಮೇಲೆ ಹಠಾತ್ ದಾಳಿ ನಡೆಸಿತು. ಈ ವೇಳೆ ಅಕ್ರಮ ಮಟ್ಕಾ ಆಟದಲ್ಲಿ ತೊಡಗಿದ್ದ ಮಂಜುನಾಥ ಗಾಣಿಗ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಂದೂರು: ಉಡುಪಿ ಜಿಲ್ಲೆಯ ಮಟ್ಕಾ ಹಾವಳಿ ಮಿತಿ ಮೀರಿದೆ. ಇದೀಗ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜುಗಾರಿ ಆಟವಾಡುತ್ತಿದ್ದ ವ್ಯಕ್ತಿಯ ಮೇಲೆ ಬೈಂದೂರು ಪೊಲೀಸರು ದಾಳಿ ನಡೆಸಿದ್ದಾರೆ. ಓರ್ವನನ್ನು ಪೊಲೀಸರು ಬಂಧಿಸುವಂತೆ ಯಶಸ್ವಿ ಆಗಿದ್ದಾರೆ.

ಮೇ 9 ರಂದು ತಗ್ಗರ್ಸೆ ಗ್ರಾಮದ ಬೈಂದೂರು ವ್ಯವಸಾಯ ಸೇವಾ ಸಂಘದ ಎದುರಿರುವ ಅನ್ನಪೂರ್ಣ ಹೋಟೆಲ್‌ ಬಳಿಯ ಖಾಲಿ ಜಾಗದಲ್ಲಿ ಮಟ್ಕಾ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬೈಂದೂರು ಪೊಲೀಸ್ ಉಪನಿರೀಕ್ಷಕ (PSI) ಸುನೀಲ ಕುಮಾರ್ ಬಿ.ವೈ ಅವರಿಗೆ ಲಭಿಸಿತ್ತು. ಮಾಹಿತಿಯ ಆಧಾರದ ಮೇಲೆ ಎಚ್ಚೆತ್ತ ಪೊಲೀಸರು, ಕೂಡಲೇ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ದಾಳಿಗೆ ಸಿದ್ಧತೆ ನಡೆಸಿದರು.

ಮಧ್ಯಾಹ್ನ ಸುಮಾರು 1:30 ಗಂಟೆಯ ಸುಮಾರಿಗೆ ಪಿಎಸ್‌ಐ ಸುನೀಲ ಕುಮಾರ್ ಮತ್ತು ಸಿಬ್ಬಂದಿಯ ತಂಡ ಸ್ಥಳದ ಮೇಲೆ ಹಠಾತ್ ದಾಳಿ ನಡೆಸಿತು. ಈ ವೇಳೆ ಅಕ್ರಮ ಮಟ್ಕಾ ಆಟದಲ್ಲಿ ತೊಡಗಿದ್ದ ಮಂಜುನಾಥ ಗಾಣಿಗ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಕೋರಿದ್ದಾರೆ.

Byndoor Matka Gambling Raid byndoor police taggarse  Manjunath Ganiga arrest Kannada News

 

Exit mobile version