ಜ್ಯೋತಿಷಿ ಕಮಲಾಕರ್‌ ಭಟ್‌ ಜೊತೆ 5 ತಿಂಗಳಿಂದ ನನ್ನ ಪತ್ನಿಯ ಅಕ್ರಮ ಸಂಬಂಧ; ಸಿದ್ದಾಪುರದ ಮಹೇಶ್‌ ನಾಯ್ಕ್‌ ಹೇಳಿದ್ದಿಷ್ಟು

Astrologer Kamalakar Bhat Case:: ಶಿವಮೊಗ್ಗ: “ನನ್ನ ಹೆಂಡತಿ ಮತ್ತು ಜ್ಯೋತಿಷಿ ಕಮಲಾಕರ್ ಭಟ್ ಒಂದೇ ಕೋಣೆಯಲ್ಲಿ ಇರುತ್ತಿದ್ದರು, ನಮ್ಮನ್ನು ಹೊರಗೆ ಮಲಗಿಸುತ್ತಿದ್ದರು ಎಂದು ಮಗಳು ಅತ್ತು ಕರೆದಿದ್ದಳು. ಅವಳನ್ನು ರಕ್ಷಿಸಲು ಹೋಗಿದ್ದೇ ತಪ್ಪಾಯಿತೇ?” – ಹೀಗೆಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ್ ನಾಯ್ಕ್ ಕಣ್ಣೀರಿಟ್ಟಿದ್ದಾರೆ. ಸಿದ್ದಾಪುರದಲ್ಲಿ ನಡೆದ ಭೀಕರ ಕೊಲೆ ಮತ್ತು ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಪತಿ ಮಹೇಶ್ ನೀಡಿದ ಆಘಾತಕಾರಿ ಮಾಹಿತಿ ಇಲ್ಲಿದೆ:

ಮಗಳ ರಕ್ಷಣೆಗೆ ಹೋದಾಗ ನಡೆದಿದ್ದೇನು?

ಮಹೇಶ್ ಅವರ ಪತ್ನಿ ಸುಚಿತ್ರಾ ಕಳೆದ ಐದು ತಿಂಗಳಿನಿಂದ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಶಿವಮೊಗ್ಗದಲ್ಲಿ ನೆಲೆಸಿದ್ದರು. ಫೆಬ್ರವರಿ 1ರಂದು ಮಗಳು ತಂದೆಗೆ ಫೋನ್ ಮಾಡಿ, “ಪಪ್ಪಾ, ಇಲ್ಲಿ ಮಮ್ಮಿ ನನಗೆ ಟಾರ್ಚರ್ ಕೊಡುತ್ತಿದ್ದಾಳೆ, ನನ್ನನ್ನು ಕರೆದುಕೊಂಡು ಹೋಗು ಇಲ್ಲದಿದ್ದರೆ ನಾನು ಸಾಯುತ್ತೇನೆ” ಎಂದು ಕೇಳಿಕೊಂಡಿದ್ದಳು. ಮಗಳ ರಕ್ಷಣೆಗಾಗಿ ಆಕೆಯನ್ನು ಮನೆಗೆ ಕರೆತಂದಿದ್ದೇ ಈ ಎಲ್ಲಾ ಗಲಾಟೆಗೆ ಕಾರಣವಾಯಿತು.

ಮಗಳನ್ನು ಕರೆತಂದಿದ್ದಕ್ಕೆ ಆಕ್ರೋಶಗೊಂಡ ಸುಚಿತ್ರಾ ಮತ್ತು ಜ್ಯೋತಿಷಿ ಕರುಣಾಕರ್‌ ಭಟ್ ತಂಡ, ಶಿವಮೊಗ್ಗದಿಂದ ರೌಡಿಗಳನ್ನು ಕರೆಸಿಕೊಂಡು ದಾಳಿ ನಡೆಸಿದ್ದಾರೆ. ರಾತ್ರಿ ವೇಳೆ ಅಣ್ಣ ವಸಂತ್ ನಾಯ್ಕ್ ಮನೆಗೆ ನುಗ್ಗಿದ ತಂಡ ಚಾಕುವಿನಿಂದ ಮನಸೋಇಚ್ಛೆ ಇರಿದಿದೆ. ಮಹೇಶ್‌ನನ್ನು ರಕ್ಷಿಸಲು ಬಂದ ಅಣ್ಣ ವಸಂತ್ ನಾಯ್ಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹೇಶ್ ಹಾಗೂ ಅವರ ಸ್ನೇಹಿತ ಕುಮಾರ್ ನಾರಾಯಣ ನಾಯ್ಕ್ ಅವರಿಗೂ ಗಂಭೀರ ಗಾಯಗಳಾಗಿವೆ.

ಕುಂದಾಪುರ : ಎಸ್‌ಪಿಜಿ ಗೋಲ್ಡ್ ಅಂಡ್ ಡೈಮಂಡ್ ಅಂಗಡಿಯಲ್ಲಿ ಕಳವು, ಆರೋಪಿ ಅರೆಸ್ಟ್

ಫೇಸ್‌ಬುಕ್ ಸಂಬಂಧವೇ ಮುಳುವಾಯಿತೇ?

ಪತ್ನಿ ಸುಚಿತ್ರಾ ಮೊದಲಿನಿಂದಲೂ ಫೇಸ್‌ಬುಕ್ ಮೂಲಕ ಅಪರಿಚಿತ ಯುವಕರೊಂದಿಗೆ ಸಂಪರ್ಕ ಹೊಂದಿದ್ದಳು ಎಂದು ಮಹೇಶ್ ಆರೋಪಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಬುದ್ಧಿ ಹೇಳಿದರೂ ಕೇಳದೆ, ಕೊನೆಗೆ ಜ್ಯೋತಿಷಿಯೊಂದಿಗೆ ಸಂಬಂಧ ಬೆಳೆಸಿ ಮನೆ ಬಿಟ್ಟು ಹೋಗಿದ್ದಳು. ಈ ಅನೈತಿಕ ಸಂಬಂಧದ ವಿರೋಧ ಹಾಗೂ ಮಗಳ ಹಠವೇ ಕೊನೆಗೆ ಒಂದು ಜೀವ ಬಲಿ ಪಡೆಯಲು ಕಾರಣವಾಗಿದೆ.

Exit mobile version