ವಾಹನ ಸವಾರರಿಗೆ ಬಿಗ್​ ರಿಲೀಫ್​: ಫಾಸ್ಟ್​ಟ್ಯಾಗ್​ KYC ನವೀಕರಣ ನಿಯಮಾವಳಿಗಳಲ್ಲಿ ಬದಲಾವಣೆ

ದೇಶವ್ಯಾಪಿ ಜಾರಿಯಲ್ಲಿರುವ ಫಾಸ್ಟ್​ಟ್ಯಾಗ್​​ ವ್ಯವಸ್ಥೆಯಿಂದಾಗಿ ಟೋಲ್​ ಸುಂಕ ಪಾವತಿಯು ಅತ್ಯಂತ ಪಾರದರ್ಶಕ ಮಾತ್ರವಲ್ಲದೇ ವೇಗವನ್ನೂ ಪಡೆದುಕೊಂಡಿದೆ. ಇದೀಗ ವಾಹನ ಸವಾರರಿಗೆ ಫಾಸ್ಟ್​ಟ್ಯಾಗ್​ ಕೆವೈಸಿ ನಿಯಮಾವಳಿ ವಿಚಾರದಲ್ಲಿ ಬಿಗ್​ ರಿಲೀಫ್​ ದೊರಕಿದೆ. ವಾಹನ ಸವಾರರ ಬಹುದಿನಗಳ ಬೇಡಿಕೆಯಾಗಿದ್ದ ಕೆವೈಸಿ ನವೀಕರಣ ವಿಚಾರದಲ್ಲಿ ಕೇಂದ್ರ ಸರ್ಕಾರ ಗುಡ್​ ನ್ಯೂಸ್​ ನೀಡಿದೆ.
ಈ ಮೊದಲೆಲ್ಲ ಪ್ರತಿ ವರ್ಷ ವಿವಿಧ ದಾಖಲೆಗಳನ್ನು ಸಲ್ಲಿಸಿ ಪ್ರತಿ ವರ್ಷ KYC ನವೀಕರಣ ಮಾಡುವುದು ಪ್ರತಿಯೊಬ್ಬ ವಾಹನ ಸವಾರರಿಗೂ ಕಡ್ಡಾಯವಾಗಿತ್ತು. ಆದರೆ ಈಗ ಈ ನಿಯಮಾವಳಿಗಳಲ್ಲಿ ಸರಳತೆಯನ್ನು ತಂದಿರುವ ಕೇಂದ್ರ ಸರ್ಕಾರವು ಇನ್ಮುಂದೆ ಪ್ರತಿ ವರ್ಷ KYC ನವೀಕರಣ ಮಾಡುವ ಅಗತ್ಯ ಇಲ್ಲ ಎಂದು ಹೇಳಿದೆ.
ಅಲ್ಲದೇ ಹೊಸ ಬಾರಿ ವಾಹನ ಖರೀದಿ ಮಾಡಿದ ಸಂದರ್ಭದಲ್ಲಿ ಅಥವಾ ಮೊಟ್ಟ ಮೊದಲ ಬಾರಿಗೆ ಫಾಸ್ಟ್​ಟ್ಯಾಗ್​ಗೆ ನೋಂದಣಿಯಾದ ಸಂದರ್ಭದಲ್ಲಿ ಒಮ್ಮೆ KYC ಸಲ್ಲಿಸಿದರೆ ಮತ್ತೊಮ್ಮೆ ನವೀಕರಣ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ತಿಳಿಸಿದೆ. ಇದರಿಂದ ವಾಹನ ಸವಾರರಿಗೆ ಫಾಸ್ಟ್​ಟ್ಯಾಗ್​ ಬಳಕೆ ಮತ್ತಷ್ಟು ಸರಳೀಕೃತಗೊಂಡಂತೆ ಆಗಿದೆ.

Exit mobile version