ಬಜೆಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಾಳಗ: ಬಜಾಜ್ ಚೇತಕ್ C25 vs ಟಿವಿಎಸ್ ಐಕ್ಯೂಬ್ vs ವಿದಾ VX2

Bajaj Chetak C25 vs TVS iQube vs Vida VX2: ದೇಶದ ಇಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಲು ಮುಂದಾಗಿರುವ ಬಜಾಜ್ ಆಟೋ, ಹೊಸ ‘ಚೇತಕ್ C25’ (Chetak C25) ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ಕೂಟರ್ ಪ್ರಮುಖವಾಗಿ ಟಿವಿಎಸ್ ಐಕ್ಯೂಬ್ ಮತ್ತು ಹೀರೋ ವಿದಾ VX2 ಗೋ ಸ್ಕೂಟರ್‌ಗಳಿಗೆ ನೇರ ಪೈಪೋಟಿ ನೀಡುತ್ತಿದೆ. ಈ ಮೂರು ಸ್ಕೂಟರ್‌ಗಳಲ್ಲಿ ನಿಮ್ಮ ಖರೀದಿಗೆ ಯಾವುದು ಉತ್ತಮ ಎಂಬ ವಿವರ ಇಲ್ಲಿದೆ.

ಬ್ಯಾಟರಿ ಸಾಮರ್ಥ್ಯ ಮತ್ತು ಓಡುವ ದೂರ

ಬ್ಯಾಟರಿ ವಿಷಯಕ್ಕೆ ಬಂದರೆ, ಬಜಾಜ್ ಚೇತಕ್ C25 ಅತ್ಯುತ್ತಮ ಎನ್ನಬಹುದು. ಇದು 2.5 kWh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 113 ಕಿ.ಮೀ ವರೆಗೆ ಚಲಿಸುತ್ತದೆ. ಇದಕ್ಕೆ ಹೋಲಿಸಿದರೆ, ಟಿವಿಎಸ್ ಐಕ್ಯೂಬ್ (ಬೇಸ್ ವೇರಿಯಂಟ್) 2.2 kWh ಬ್ಯಾಟರಿ ಹೊಂದಿದ್ದು 94 ಕಿ.ಮೀ ರೇಂಜ್ ನೀಡುತ್ತದೆ. ಇನ್ನು ವಿದಾ VX2 ಗೋ ಕೂಡ 2.2 kWh ಬ್ಯಾಟರಿಯೊಂದಿಗೆ 92 ಕಿ.ಮೀ ರೇಂಜ್ ನೀಡುತ್ತದೆ.

ಚಾರ್ಜಿಂಗ್ ವೇಗ ಮತ್ತು ಮೋಟಾರ್ ಪವರ್

ಚಾರ್ಜಿಂಗ್ ವೇಗದಲ್ಲಿ ವಿದಾ VX2 ಗೋ ಮುಂದಿದೆ. ಇದು ಫಾಸ್ಟ್ ಚಾರ್ಜರ್ ಬಳಸಿದರೆ ಕೇವಲ 62 ನಿಮಿಷಗಳಲ್ಲಿ ಶೇ. 80ರಷ್ಟು ಚಾರ್ಜ್ ಆಗುತ್ತದೆ. ಬಜಾಜ್ ಚೇತಕ್ C25 ಇದೇ ಪ್ರಮಾಣದ ಚಾರ್ಜ್ ಆಗಲು ಸುಮಾರು 2 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ. ಮೋಟಾರ್ ಸಾಮರ್ಥ್ಯದಲ್ಲಿ ಚೇತಕ್ ಮತ್ತು ಐಕ್ಯೂಬ್ ನಗರದ ಓಡಾಟಕ್ಕೆ ಪೂರಕವಾದ 2.2 kW ವರೆಗಿನ ಪೀಕ್ ಪವರ್ ನೀಡುತ್ತವೆ.

ಬೆಲೆ ಎಷ್ಟು?

ಬೆಲೆಯ ದೃಷ್ಟಿಯಿಂದ ನೋಡುವುದಾದರೆ, ವಿದಾ VX2 ಗೋ ಅತ್ಯಂತ ಅಗ್ಗವಾಗಿದೆ. ಇದರ ಆರಂಭಿಕ ಬೆಲೆ ₹73,850 ಆಗಿದ್ದು, ಬ್ಯಾಟರಿ ಸಬ್‌ಸ್ಕ್ರಿಪ್ಷನ್ (BaaS) ಯೋಜನೆಯಡಿ ₹44,990ಕ್ಕೆ ಲಭ್ಯವಿದೆ. ಬಜಾಜ್ ಚೇತಕ್ C25 ಬೆಲೆ ₹91,399 ಆಗಿದ್ದರೆ, ಟಿವಿಎಸ್ ಐಕ್ಯೂಬ್ ಬೆಲೆ ₹94,434 ರಿಂದ ಆರಂಭವಾಗುತ್ತದೆ.

45 Film OTT Release: ಈ ಒಟಿಟಿಯಲ್ಲಿ 45 ಸಿನಿಮಾ; ಶಿವಣ್ಣ, ಉಪೇಂದ್ರ, ರಾಜ್‌ ಶೆಟ್ಟಿ, ಅರ್ಜುನ್‌ ಜನ್ಯಾ ಸಿನಿಮಾ ರಿಲೀಸ್‌ ದಿನಾಂಕ ಇಲ್ಲಿದೆ

ಯಾವುದು ನಿಮಗೆ ಸೂಕ್ತ?

Exit mobile version